Thursday, September 4, 2008

ರಸಗುಲ್ಲ

ಬೇಕಾಗುವ ಪದಾರ್ಥಗಳು
  • ಹಾಲು ೪ ಕಪ್
  • ಸಕ್ಕರೆ ೧ ೧/ಕಪ್
  • ನೀರು ೪ ೧/೨ ಕಪ್
  • ನಿಂಬೆರಸ ೩ ಚಮಚ

ಮಾಡುವ ವಿಧಾನ
ಹಾಲನ್ನು ಕಾಯಲು ಇಟ್ಟು, ಅದು ಉಕ್ಕು ಬಂದಾಗ ನಿಂಬೆರಸವನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ೨ ನಿಮಿಷ ಬಿಟ್ಟು ಒಲೆಯಿಂದ ಇಳಿಸಿ. ಒಡೆದ ಹಾಲನ್ನು ಒಂದು ಬಟ್ಟೆಯಲ್ಲಿ ಸೋಸಿ ತೆಗೆಯಿರಿ. (ಒಡೆದ ಹಾಲಿನ ನೀರನ್ನು ಚಪಾತಿ ಅಥವಾ ಪರೋಟ ಮಾಡುವಾಗ ಹಿಟ್ಟು ಕಲಸಲು ಉಪಯೋಗಿಸಬಹುದು.) ಇದಕ್ಕೆ ಸ್ವಲ್ಪ ತಣ್ಣೀರನ್ನು ಸುರಿದು ಚೆನ್ನಾಗಿ ಹಿಂಡಿ ತೆಗೆಯಿರಿ. ನೀರನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಹಾಕಿ ಕರಗುವವರೆಗೂ ಕೈಅಡಿಸುತ್ತ ಇರಿ. ಈಗ ತಣ್ಣಗಾದ ಒಡೆದ ಹಾಲನ್ನು ಚೆನ್ನಾಗಿ ನಾದಿ, ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಅದನ್ನು ಸಕ್ಕರೆ ಪಾಕದಲ್ಲಿ ಹಾಕಿ ೮-೧೦ ನಿಮಿಷ ಚೆನ್ನಾಗಿ ಕುದಿಸಿ. ಉಂಡೆಗಳು ಸ್ವಲ್ಪ ದಪ್ಪ್ಪ ಆಗುವವರೆಗೂ ಪಾಕದಲ್ಲಿ ಕುದಿಸಿ. ನಂತರ ಫ್ರಿದ್ಗೆನಲ್ಲಿ ಇಟ್ಟು ತಣ್ಣಗಾದ ಮೇಲೆ ಸೇವಿಸಿ.

No comments: