Showing posts with label ಸಿಹಿ ತಿಂಡಿಗಳು. Show all posts
Showing posts with label ಸಿಹಿ ತಿಂಡಿಗಳು. Show all posts

Monday, August 25, 2008

ಶಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು
  • ಶಾವಿಗೆ ೧/೨ ಕಪ್
  • ಹಾಲು ೨ ಕಪ್
  • ಸಕ್ಕರೆ ೧/೨ ಕಪ್
  • ತುಪ್ಪ ೨ ಟೇಬಲ್ ಸ್ಪೂನ್
  • ಗೋಡಂಬಿ ಸ್ವಲ್ಪ
  • ಒಣ ದ್ರಾಕ್ಷಿ ಸ್ವಲ್ಪ
  • ಕೇಸರಿ ದಳ ೨-೩
  • ಏಲಕ್ಕಿ ಪುಡಿ ಸ್ವಲ್ಪ
ಮಾಡುವ ವಿಧಾನ
ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಕಾಯಲು ಇಟ್ಟು ಅದರಲ್ಲಿ ಗೋಡಂಬಿ ಹಾಗು ದ್ರಾಕ್ಷಿಯನ್ನು ಹುರಿದು ಬೇರೆ ಕಡೆ ತಗೆದಿಡಿ . ಅದೇ ತುಪ್ಪದಲ್ಲಿ ಶಾವಿಗೆಯನ್ನು ಕೆಂಪಗೆ ಹುರಿದು ಅದಕ್ಕೆ ಕಾದು ಆರಿದ ಹಾಲನ್ನು ಸೇರಿಸಿ ಬೇಯಿಸಿ . ಒಲೆಯನ್ನು ಆರಿಸಿ ೧ ನಿಮಿಷ ಬಿಟ್ಟು ಸಕ್ಕರೆ , ಏಲಕ್ಕಿ, ಕೇಸರಿದಳ ಹಾಗು ಹುರಿದುಕೊಂಡ ಗೋಡಂಬಿ ಹಾಗು ದ್ರಾಕ್ಷಿಯನ್ನು ಹಾಕಿ ಅಲಂಕರಿಸಿ ನೀಡಿ.
(ಇದನ್ನು ಫ್ರಿದ್ಗಿನಲ್ಲಿ ಇಟ್ಟು ಥನ್ನಗೂ ಸೇವಿಸಬಹುದು .)