Showing posts with label ಸಿಹಿ ತಿನಿಸುಗಳು. Show all posts
Showing posts with label ಸಿಹಿ ತಿನಿಸುಗಳು. Show all posts

Thursday, August 28, 2008

ಬೀಸನ್ ಉಂಡೆ

ಬೇಕಾಗುವ ಪದಾರ್ಥಗಳು
  • ಕಡಲೆ ಹಿಟ್ಟು
  • ಸಕ್ಕರೆಪುಡಿ ೧ ಕಪ್
  • ತುಪ್ಪ ೧/೨ ಕಪ್
  • ಏಲಕ್ಕಿ ಪುಡಿ ೧/೨ ಟೀ ಚಮಚ
  • ಗೋಡಂಬಿ ದ್ರಾಕ್ಸಿ ಚೂರುಗಳು
ಮಾಡುವ ವಿಧಾನ
ಮೊದಲು ಗೋಡಂಬಿ ಹಾಗೂ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದುಕೊಂಡು ತೆಗೆದಿಡಿ. ಅದೇ ತುಪ್ಪದಲ್ಲಿ ಕಡಲೆಹಿಟ್ಟನ್ನು ಸಣ್ಣ ಉರಿಯಲ್ಲಿ ಚೆನ್ನಾಗಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಇದನ್ನು ಆರಲು ಬಿಟ್ಟು, ಆರಿದ ನಂತರ ಇದಕ್ಕೆ ಸಕ್ಕರೆ ಪುಡಿಯನ್ನು, ಏಲಕ್ಕಿ ಹಾಗೂ ಹುರಿದ ಗೋಡಂಬಿ, ದ್ರಾಕ್ಷಿಯನ್ನು ಹಾಕಿ ಉಂಡೆಯನ್ನು ಕಟ್ಟಿರಿ.

Monday, August 25, 2008

ಚಿರೋಟಿ

ಬೇಕಾಗುವ ಸಾಮಗ್ರಿಗಳು
  • ಚಿರೋಟಿ ರವಾ ೧ ಕಪ್
  • ಮೈದಾ ಹಿಟ್ಟು ೧ ಕಪ್
  • ತುಪ್ಪ ಸ್ವಲ್ಪ
  • ಉಪ್ಪು ಸ್ವಲ್ಪ
  • ಸಕ್ಕರೆ ೨ ಕಪ್
  • ನೀರು ೧ ೧/೨ ಕಪ್
  • ಎಣ್ಣೆ ಕರಿಯಲು
  • ಏಲಕ್ಕಿ ಪುಡಿ ಸ್ವಲ್ಪ


ಮಾಡುವ ವಿಧಾನ

ಚಿರೋಟಿ ರವ ಹಾಗು ಮೈದಾ ಹಿಟ್ಟಿಗೆ ೧ ಚಿಟಿಕೆ ಉಪ್ಪು, ೨-೩ ಟೇಬಲ್ ಚಮಚ ತುಪ್ಪ ಹಾಗು ನೀರು ಹಾಕಿ ಚೆನ್ನಾಗಿ ಕಲಸಿ, ಒದ್ದೆ ಬಟ್ಟೆ ಮುಚ್ಚಿ ೧/೨ ಘಂಟೆ ಹಾಗೆ ಬಿಡಿ.
೩ ಟೇಬಲ್ ಚಮಚ ತುಪ್ಪಕ್ಕೆ ೧ ಚಿಟಿಕೆ ಉಪ್ಪು ಹಾಕಿ ೨-೩ ನಿಮಿಷ ಚೆನ್ನಾಗಿ ತಿಕ್ಕಿ.
ನೂಲು ಎಳೆಯ ಸಕ್ಕರೆ ಪಾಕ ಮಾಡಿಟ್ಟುಕೊಳ್ಳಿ. ಎಡಕ್ಕೆ ಸ್ವಲ್ಪ ಏಲಕ್ಕಿ ಪುಡಿ ಬೆರೆಸಿರಿ.
ಕಲಸಿಟ್ಟ ಹಿಟ್ಟಿನಿಂದ ೨ ಉಂಡೆಗಳನ್ನು ಮಾಡಿ , ೨ ಹಾಳೆಗಳನ್ನು ಲಟಿಸಿಕೊಲ್ಲಿ. ಒಂದು ಹಾಳೆಯ ಮೇಲೆ ತುಪ್ಪ ಹಾಗು ಉಪ್ಪಿನ ಮಿಶ್ರಣ ವನ್ನು ಸವರಿ ಆರದ ಮೇಲೆ ಇನ್ನೊಂದು ಹಾಳೆ ಇಡಿ. ಇದನ್ನು ಎರಡು ಬದಿಯಿಂದ ಸುರುಳಿ ಸುತ್ತುತ್ತ ಬಂದು ಕೊನೆಯಲ್ಲಿ ಒಂದು ಉದ್ದನೆಯ ಸುರುಳಿಯಾಗಿ ಮಾಡಿ. ಇದನ್ನು ೧ ಇಂಚು ಚಿಕ್ಕದಾಗಿ ಕಟ್ ಮಾಡಿಟ್ಟು ಕೊಲ್ಲಿ. ಈ ತುಂಡುಗಳನ್ನು ಪುರಿಯ ಅಗಲಕ್ಕೆ ಲಟ್ಟಿಸಿ, ಚಾಕುವಿನಿಂದ ೪-೫ ಸಾರಿ ಚುಚಿ (ಎಣ್ಣೆಯಲ್ಲಿ ಹಾಕಿದಾಗ ಉಬ್ಬದಿರಲು), ಎಣ್ಣೆಯಲ್ಲಿ ಕರಿಯಿರಿ.
ಕರಿದ ಚಿರೋತಿಗಳನ್ನು ಪಾಕದಲ್ಲಿ ಅಡ್ಡಿ ಆರಲು ಬಿಡಿ.