Showing posts with label ಸ್ನಾಕ್ಸ್. Show all posts
Showing posts with label ಸ್ನಾಕ್ಸ್. Show all posts

Wednesday, September 17, 2008

ನೂಡಲ್ಸ್ ಪಕೋಡ

ಬೇಕಾಗುವ ಪದಾರ್ಥಗಳು
  • ನೂಡಲ್ಸ್ ೧ ಪ್ಯಾಕೆಟ್
  • ಕಡಲೆಹಿಟ್ಟು ೧ ಕಪ್
  • ಆಲೂಗಡ್ಡೆ (ಬೀಯಿಸಿದ್ದು) ೧
  • ಈರುಳ್ಳಿ (ಉದ್ದಕ್ಕೆ ಹೆಚ್ಚಿದ್ದು) ೨
  • ನೂಡಲ್ಸ್ ಮಸಾಲ
  • ಉಪ್ಪು ಸ್ವಲ್ಪ
ಮಾಡುವ ವಿಧಾನ
ನೂಡಲ್ಸ್ ಅನ್ನು ಸ್ವಲ್ಪ ನೀರಿನಲ್ಲಿ ಬೇಯಲು ಇಟ್ಟು, ಇನ್ನೊಂದು ಪಾತ್ರೆಯಲ್ಲಿ ಬೆಂದ ಆಲೂಗಡ್ಡೆ , ಈರುಳ್ಳಿ, ಸ್ವಲ್ಪ ಉಪ್ಪು, ನೂಡಲ್ಸ್ ಮಸಾಲ ಹಾಕಿ ಚೆನ್ನಾಗಿ ಕಲಸಿ. ನಂತರ ಇದಕ್ಕೆ ಬೆಂದ ನೂಡಲ್ಸ್ ಹಾಗು ಕಡಲೆಹಿಟ್ಟನ್ನು ಹಾಕಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಕಾದ ಎಣ್ಣೆಯಲ್ಲಿ ಕರಿಯಿರಿ.
ಇದನ್ನು ಯಾವುದಾದರು ಸೋಸ್ ಜೊತೆಗೆ ಸೇವಿಸಬಹುದು.

Thursday, August 28, 2008

ಸಮೋಸ

ಬೇಕಾಗುವ ಪದಾರ್ಥಗಳು
  • ಆಲೂಗಡ್ಡೆ ೧
  • ಬಟಾಣಿ ೧/೨ ಕಪ್ (ಬೀಯಿಸಿದ್ದು)
  • ಹಸಿ ಮೆಣಸಿನಕಾಯಿ ಪೇಸ್ಟ್ ೧ ಟೇಬಲ್ ಚಮಚ
  • ಅಚ್ಚ ಖಾರದ ಪುಡಿ ೧/೨ ಟೀ ಚಮಚ
  • ಉಪ್ಪು ಸ್ವಲ್ಪ
  • ಕೊತ್ಮೆರಿ ಸೊಪ್ಪು ಸ್ವಲ್ಪ
  • ಅರಿಶಿನ ಸ್ವಲ್ಪ
  • ಎಣ್ಣೆ ಕರಿಯಲು
  • ಗೋಧಿ ಹಿಟ್ಟು ೧ ಕಪ್
  • ಅಕ್ಕಿಹಿಟ್ಟು ೩ ಟೇಬಲ್ ಚಮಚ
ಮಾಡುವ ವಿಧಾನ
ಗೋಧಿ ಹಿಟ್ಟು ಹಾಗು ಅಕ್ಕಿಹಿಟ್ಟು , ಸ್ವಲ್ಪ ಉಪ್ಪು ಎಲ್ಲ ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ, ೧೦ ನಿಮಿಷ ಇಡಿ.
ಅಲೂಗದ್ದೆಯನ್ನು ಬೇಯಿಸಿ, ಸಿಪ್ಪೆತೆಗದು, ಅದಕ್ಕೆ ಮಿಕ್ಕ ಎಲ್ಲ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿ.
ಹಿಟ್ಟನ್ನು ಪುರಿಯ ಅಗಲಕ್ಕೆ ಸ್ವಲ್ಪ ದಪ್ಪಗೆ ಲಟ್ಟಿಸಿ, ಅದನ್ನು ಅರ್ಧ ಭಾಗ ಕಟ್ ಮಾಡಿ. ಕತ್ತರಿಸಿದ ಅರ್ಧ ಭಾಗವನ್ನು ತ್ರಿಕೋನಾಕಾರದಲ್ಲಿ ಮಡಚಿ, ಅದರೊಳಗೆ ಆಲೂಗಡ್ಡೆ ಮಿಶ್ರಣವನ್ನು ತುಂಬಿ, ಮೀಲ್ಭಾಗವನ್ನು ಮಡಚಿ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ.

Wednesday, August 27, 2008

ಪೀನಟ್ ಮಸಾಲ

ಬೇಕಾಗುವ ಪದಾರ್ಥಗಳು
  • ಹುರಿದು ಸಿಪ್ಪೆ ತೆಗೆದ ಕಡಲೆ ಬೀಜ ೧ ಕಪ್
  • ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು ) ೧/೪ ಕಪ್
  • ಹಸಿಮೆಣಸಿನ ಕಾಯಿ (ಚಿಕ್ಕದಾಗಿ ಹೆಚ್ಚಿದ್ದು ) ೨
  • ಕೊಟ್ಮೆರಿ ಸೊಪ್ಪು(ಚಿಕ್ಕದಾಗಿ ಹೆಚ್ಚಿದ್ದು ) ೨ ಟೇಬಲ್ ಸ್ಪೂನ್
  • ಉಪ್ಪು ರುಚಿಗೆ
  • ಟೊಮೇಟೊ (ಚಿಕ್ಕದಾಗಿ ಹೆಚ್ಚಿದ್ದು) ೧/೪ ಕಪ್
ಮಾಡುವ ವಿಧಾನ
ಎಲ್ಲವನ್ನು ಚೆನ್ನಾಗಿ ಸೇರಿಸಿ ಊಟದ ಮೊದಲು ಸ್ತಾರ್ತೆರ್ ತರ ಕೊಡಬಹುದು.

ಸಾಬುದಾನ ಖೀಸ್

ಬೇಕಾಗುವ ಪದಾರ್ಥಗಳು
  • ಸಬ್ಬಕ್ಕಿ ೧ ಕಪ್
  • ಆಲುಗಡ್ಡೆ ಬೇಯಿಸಿ ಪುಡಿಮಾಡಿದ್ದು ೧-೨
  • ಕಡಲೇಕಾಯಿ ಬೀಜದ ಪುಡಿ (ಹುರಿದು ಸಿಪ್ಪೆ ತೆಗೆದು ಪುಡಿ ಮಾಡಿದ್ದು) ೧ ಕಪ್
  • ಉಪ್ಪು ರುಚಿಗೆ
  • ಕೊತ್ಮೆರಿ ಸೊಪ್ಪು ಸ್ವಲ್ಪ
  • ಹಸಿ ಮೆಣಸಿನ ಕಾಯಿ ೨-೩
  • ಸಾಸಿವೆ ಅಥವಾ ಜೀರಿಗೆ ಸ್ವಲ್ಪ
  • ಎಣ್ಣೆ ೩ ಟೇಬಲ್ ಸ್ಪೂನ್
  • ನಿಂಬೆ ರಸ ಸ್ವಲ್ಪ
  • ಕಾಯಿ ತುರಿ ಸ್ವಲ್ಪ

ಮಾಡುವ ವಿಧಾನ
ಮೊದಲು ಸಬ್ಬಕ್ಕಿ ಯನ್ನು ೨ ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ಚೆನ್ನಾಗಿ ನೆನೆದು ಕಾಳುಗಳು ಉಬ್ಬಬೇಕು.
ನಂತರ ಎಣ್ಣೆಯನ್ನು ಕಾಯಲು ಇತ್ತು ಅದಕ್ಕೆ ಸಾಸಿವೆ/ಜೀರಿಗೆ , ಹಸಿಮೆಣಸಿನಕಾಯಿ, ನಂತರ ಸಬ್ಬಕ್ಕಿಯನ್ನು ಹಾಕಿ ಕಡಿಮೆ ಉರಿಯ ಮೇಲೆ ಹುರಿಯಿರಿ. ಇದು ಚೆನ್ನಾಗಿ ಬೆಂದ ನಂತರ ಇದಕ್ಕೆ ಆಲೂಗಡ್ಡೆ, ಕಡಲೇಕಾಯಿ ಬೀಜದ ಪುಡಿ, ನಿಂಬೆ ರಸ, ಉಪ್ಪು, ಕಾಯಿ ತುರಿ,ಕೊತ್ಮೆರಿ ಸೊಪ್ಪು ಹಾಕಿ ಚೆನ್ನಾಗಿ ಕೈಯಾಡಿಸಿ ಸವಿಯಲು ನೀಡಿ.