Wednesday, August 27, 2008

ಶಾವಿಗೆ ಉಪ್ಪಿಟ್ಟು

ಬೇಕಾಗುವ ಪದಾರ್ಥಗಳು
  • ಶಾವಿಗೆ ೧ ಕಪ್
  • ಸಾಸಿವೆ ಸ್ವಲ್ಪ
  • ಉದ್ದಿನ ಬೀಳೆ ಸ್ವಲ್ಪ
  • ಕಡಲೆ ಬೇಳೆ ಸ್ವಲ್ಪ
  • ಇಂಗು ಸ್ವಲ್ಪ
  • ಉಪ್ಪು ಸ್ವಲ್ಪ
  • ಅರಿಶಿನ ಸ್ವಲ್ಪ
  • ಕೊಟ್ಮೆರಿ ಸೊಪ್ಪು ಸ್ವಲ್ಪ
  • ಕಾಯಿ ತುರಿ ಸ್ವಲ್ಪ
  • ಆಲೂಗಡ್ಡೆ ೧
  • ಬಟಾಣಿ ೧/ ಕಪ್
  • ಕ್ಯಾರೆಟ್ ೧/೪ ಕಪ್
  • ಬೆಂಸ್ ೧/೪ ಕಪ್
  • ಈರುಳ್ಳಿ ೧/೪ ಕಪ್
  • ಟೊಮೇಟೊ ೧/೪ ಕಪ್
  • ಎಣ್ಣೆ ಸ್ವಲ್ಪ
  • ಹಸಿಮೆಣಸಿನ ಕಾಯಿ ೨-೩
ಮಾಡುವ ವಿಧಾನ
ಮಾಡಲು ಶಾವಿಗೆಯನ್ನು ಎಣ್ಣೆಯಲ್ಲಿ ಕೆಂಪಗೆ ಹುರಿದಿಟ್ಟುಕೊಳ್ಳಿ. ಹಾಗೆಯೇ ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ಸ್ವಲ್ಪ ಎಣ್ಣೆಯನ್ನು ಕಾಯಲು ಇತ್ತು ಅದಕ್ಕೆ ಕ್ರಮವಾಗಿ ಸಾಸಿವಿ, ಅರಿಶಿನ, ಉದ್ದಿನ ಬೀಳೆ, ಕಡಲೆ ಬೀಳೆ, ಹಸಿಮೆಣಸಿನ ಕಾಯಿ, ಈರುಳ್ಳಿ, ಟೊಮೇಟೊ, ಕ್ಯಾರೆಟ್, ಬಟಾಣಿ, ಬೀನ್ಸ್ ಹಾಕಿ ೨ ೧/೨ -೩ ಕಪ್ ನೀರು ಹಾಕಿ ೮-೧೦ ನಿಮಿಷ ಚೆನ್ನಾಗಿ ಬೇಯಿಸಿ. ತರಕಾರಿಗಳು ಬೆಂದ ನಂತರ (ಬೇಕಾದಲ್ಲಿ ಸ್ವಲ್ಪ ಬಿಸಿ ನೀರನ್ನು ಹಾಕಿ ) ಅದಕ್ಕೆ ಹುರಿದ ಶಾವಿಗೆಯನ್ನು ಸೇರಿಸಿ , ಅದು ಬೆಂದ ನಂತರ ಕೊಟ್ಮೆರಿ ಹಾಗು ಕಾಯಿ ತುರಿಯಿಂದ ಅಲಂಕರಿಸಿ ಸವಿಯಲು ನೀಡಿ.

No comments: