- ಆಲೂಗಡ್ಡೆ ೩-೪
- ಈರುಳ್ಳಿ ೧ (ಬೇಕಾದಲ್ಲಿ)
- ಹಸಿ ಮೆಣಸಿನ ಕಾಯಿ ೨-೩
- ಉಪ್ಪು ಸ್ವಲ್ಪ
- ನಿಂಬೆ ರಸ ಸ್ವಲ್ಪ
- ಕೊತ್ತಂಬರಿ ಸೊಪ್ಪು ಸ್ವಲ್ಪ
- ಉದ್ದಿನ ಬೆಳೆ ಸ್ವಲ್ಪ
- ಕಡಲೆಬೇಳೆ ಸ್ವಲ್ಪ
- ಸಾಸಿವೆ ಸ್ವಲ್ಪ
- ಎಣ್ಣೆ ೨-೩ ಟೇಬಲ್ ಚಮಚ
- ಅರಿಶಿನ ಸ್ವಲ್ಪ
ಆಲೂಗಡ್ಡೆಗಳನ್ನು ಅರ್ಧ ಭಾಗ ತುಂಡು ಮಾಡಿ ಸಿಪ್ಪೆ ಸಹಿತ ಕೂಕೆರ್ನಲ್ಲಿ ಹಬೆಯಲ್ಲಿ ಬೇಯಿಸಿ. ಬೆಂದ ಆಲೂಗಡ್ಡೆಯ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಎಣ್ಣೆ ಕಾಯಿಸಿ ಅದಕ್ಕೆ ಸಾಸಿವೆ, ಅರಿಶಿನ, ಉದ್ದಿನ ಬೇಳೆ , ಕಡಲೆ ಬೇಳೆ , ಈರುಳ್ಳಿ ಹಾಗು ಹಸಿ ಮೆಣಸಿನ ಕಾಯಿಯನ್ನು ಹಾಕಿ ವಗ್ಗರಣೆ ಮಾಡಿ. ಇದಕ್ಕೆ ಆಲೂಗಡ್ಡೆಯನ್ನು ಮೇಲೆ ನಿಂಬೆ ರಸ ಹಾಗು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿರಿ.
No comments:
Post a Comment