Wednesday, August 27, 2008

ಮೇಥಿ ಥೆಪ್ಲ

ಬೇಕಾಗುವ ಪದಾರ್ಥಗಳು
  • ಗೋಧಿ ಹಿಟ್ಟು ೧ ಕಪ್
  • ಮೆಂತ್ಯ ಸೊಪ್ಪು ೧ ಕಪ್
  • ಉಪ್ಪು ರುಚಿಗೆ
  • ಅರಿಶಿನ ಸ್ವಲ್ಪ
  • ಖಾರದ ಪುಡಿ ೧ ಟೇಬಲ್ ಸ್ಪೂನ್
  • ಜೀರಿಗೆ ಪುಡಿ ೧ ಟೇಬಲ್ ಸ್ಪೂನ್
  • ಶುಂಥಿ ಬೆಳ್ಳುಳ್ಳಿ ಪೇಸ್ಟ್ ೧ ಟೀ ಸ್ಪೂನ್
  • ಹಸಿಮೆಣಸಿನಕಾಯಿ ೨
  • ಎಣ್ಣೆ ಸ್ವಲ್ಪ
  • ಕೊಟ್ಮೆರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ
ಎಲ್ಲ ಪದಾರ್ಥಗಳನ್ನು (ಮೆಂತ್ಯ ಸೊಪ್ಪು ಹಾಗು ಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ ) ಗೋಧಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ ೧೦ ನಿಮಿಷ ಹಾಗೆ ಬಿಡಿ.
ಆಮೇಲೆ ಚಪಾತಿಯ ಹಾಗೆ ಲಟ್ಟಿಸಿ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿ.

No comments: