Monday, August 25, 2008

ದಪ್ಪ ಮೆಣಸಿನಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು
  • ದಪ್ಪ ಮೆಣಸಿನಕಾಯಿ ೩-೪
  • ಎಣ್ಣೆ ೨-೩ ಟೀ ಚಮಚ
  • ಹುರಿಗಡಲೆ(ಪುಠಾನಿ) ಪುಡಿ ೩-೪ ಟೀ ಚಮಚ
  • ಸಾಸಿವೆ ಸ್ವಲ್ಪ
  • ಅರಿಶಿನದ ಪುಡಿ ಸ್ವಲ್ಪ
  • ಉಪ್ಪು ಸ್ವಲ್ಪ
  • ಕಡಲೆಬೇಳೆ ಸ್ವಲ್ಪ
  • ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ
ಎಣ್ಣೆಯನ್ನು ಕಾಯಲು ಇಟ್ಟು, ಅದಕ್ಕೆ ಸಾಸಿವೆ, ಅರಿಶಿನ ಹಾಗು ಕಡಲೆಬೇಳೆ ಹಾಕಿ ವಗ್ಗರಣೆ ಮಾಡಿ. ಇದಕ್ಕೆ ಚಿಕ್ಕದಾಗಿ ಹೆಚ್ಚಿದ ದಪ್ಪ ಮೆಣಸಿನಕಾಯಿಯನ್ನು ಹಾಕಿ ೭-೮ ನಿಮಿಷದವರೆಗೆ ಎಣ್ಣೆಯಲ್ಲಿ ಚೆನ್ನಾಗಿ ಬೇಯಿಸಿ. ಬೆಂದ ಪಲ್ಯಕ್ಕೆ ಹುರಿಗಡಲೆ ಪುಡಿ ಹಾಗು ಕೊತ್ತಂಬರಿ ಸೊಪ್ಪನ್ನು ಹಾಕಿ. ಬೇಕಾದಲ್ಲಿ ಕಾಯಿ ತುರಿಯನ್ನು ಹಾಕಬಹುದು.

No comments: