Monday, August 25, 2008

ಹಾಗಲಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು

  • ಹಾಗಲಕಾಯಿ ೧
  • ಹುರಿಗಡಲೆ ಪುಡಿ ೪ ಟೇಬಲ್ ಚಮಚ
  • ಉಪ್ಪು ಸ್ವಲ್ಪ
  • ಕಾಯಿ ತುರಿ ಸ್ವಲ್ಪ
  • ಎಣ್ಣೆ ೩ ಟೇಬಲ್ ಸ್ಪೂನ್

ಮಾಡುವ ವಿಧಾನ
ಹಾಗಲಕಾಯಿಯನ್ನು ಚಿಕ್ಕದಾಗಿ ಹೆಚ್ಚಿಕೊಂಡು, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ೧೦ ನಿಮಿಷ ಬಿಡಿ. ನಂತರ ಹಾಗಲಕಾಯಿಯ ರಸವನ್ನು ಹಿಂಡಿ ತೆಗೆದು, ಅದಕ್ಕೆ ರುಬ್ಬಿತ್ತುಕೊಂಡ ಹಸಿ ಮೆಣಸಿನಕಾಯಿ ಯನ್ನು ಸೇರಿಸಿ, ಕಾದ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ೧೦ ನಿಮಿಷ ಹುರಿಯಿರಿ. (ಇದನ್ನು ಒಂದು ಡಬ್ಬಿಯಲ್ಲಿ ತುಂಬಿ ಫ್ರಿಗಿನಲ್ಲಿ ೧೫ ದಿನಗಳವರೆಗೆ ಕೆಡದೆ ಇಡಬಹುದು). ಹುರಿದ ಪಲ್ಯಕ್ಕೆ ಹುರಿಗಡಲೆ ಹಿಟ್ಟು ಹಾಗು ಕಾಯಿ ತೂರಿ ಹಾಕಿ ನೀಡಬಹುದು.

No comments: