Wednesday, August 27, 2008

ಕಂಚಿಕಾಯಿ ಅಪ್ಪೆಹುಳಿ

ಬೇಕಾಗುವ ಸಾಮಗ್ರಿಗಳು
  • ಕಂಚಿಕಾಯಿ ೧
  • ಉಪ್ಪು ರುಚಿಗೆ
  • ಕೊಬ್ಬರಿ ಎಣ್ಣೆ ೧ ಟೀ ಸ್ಪೂನ್
  • ಸಾಸಿವೆ ಸ್ವಲ್ಪ
  • ಹಸಿಮೆಣಸಿನಕಾಯಿ ಪೇಸ್ಟ್ ೧ ಟೇಬಲ್ ಸ್ಪೂನ್
ಮಾಡುವ ವಿಧಾನ
ಕಂಚಿಕಾಯಿಯ ರಸವನ್ನು ಒಂದು ಪಾತ್ರೆಯಲ್ಲಿ ಹಿಂಡಿ ತೆಗೆಯಿರಿ.
ಎಣ್ಣೆಯನ್ನು ಕಾಯಲು ಇಟ್ಟುಅದಕ್ಕೆ ಸಾಸಿವೆ, ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ, ಇದನ್ನು ಹಾಗು ಉಪ್ಪನ್ನು ಕಂಚಿಕಾಯಿಯ ರಸಕ್ಕೆ ಸೇರಿಸಿ ಕುಡಿಯಲು ನೀಡಿ.
(ಬೇಕಾದಲ್ಲಿ ನೀರನ್ನು ಬೆರೆಸಬಹುದು)

No comments: